Satya Shanti Co-Operative Society Limited

ನಮ್ಮ ಸಂಸ್ಥೆಯ ಬಗ್ಗೆ

ಸತ್ಯ ಶಾಂತಿ ಸಹಕಾರ ಸಂಘ ನಿಯಮಿತ ಮುರ್ಕವಾಡ,ತಾ|| ಹಳಿಯಾಳ(ಉ.ಕ) 1959 ಕಲಂ 07ರ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆಯ ಅನ್ವಯ ನೊಂದಾಯಿಸಲ್ಪಟ್ಟ ಸಂಘ ಹಾಗೂ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959 ಕಲಂ 08ರ ಅನ್ವಯ ನೊಂದಣಿ ಪ್ರಮಾಣ ಪತ್ರವನ್ನು ಪಡೆಯಲಾಗಿದೆ.ನೊಂದಣಿ ಸಂಖ್ಯೆ 19/D/RSR/REG/CR-05/44396/2024-25 .ಸಂಘದ ಪ್ರಾಥಮಿಕ ಉದ್ದೇಶವೇನೆಂದರೆ ಸಂಘದ ಸದಸ್ಯರಲ್ಲಿ ಆರ್ಥಿಕ ಹಿತಾಸಕ್ತಿಗಳನ್ನು ವೃದ್ಧಿಸುವುದು ಮತ್ತು ಮಿತವ್ಯಯ,ಉಳಿತಾಯ ಹಾಗೂ ಪರಸ್ಪರರ ಸಹಾಯಕ್ಕೆ ಉತ್ತೇಜನ ನೀಡುವುದು ಮತ್ತು ಧಾರ್ಮಿಕ ಸಂಸ್ಥೆ, ವಿಶ್ವಸ್ಥ ಮಂಡಳಿ ಮತ್ತು ಇತರ ಸಂಘ ಸಂಸ್ಥೆಗಳಿಂದ ಠೇವಣಿಗಳನ್ನು ಸ್ವೀಕರಿಸುವದು.

ಸಂಘದ ನೋಂದಾಯಿತ ಕಛೇರಿಯ ವಿಳಾಸವು ಸತ್ಯ ಶಾಂತಿ ಸಹಕಾರ ಸಂಘ ನಿಯಮಿತ ಮುರ್ಕವಾಡ ತಾ,ಹಳಿಯಾಳ(ಉ.ಕ),ಅಂತಾ ಇದ್ದು,ಸಂಘದ ಎಲ್ಲ ಕಾಯ್ದೆ ಕಾನೂನುಗಳನ್ನು ಸಂಘದ ಉಪವಿಧಿಗಳಲ್ಲಿ ಸೂಚಿಸಲಾಗಿದೆ.ಹಾಗೆಯೇ ಸಂಘವು ಸದಸ್ಯರ ಠೇವಣಿಗಳನ್ನು ಸಹಕಾರಿ ಸಂಘಗಳ ಕಾಯ್ದೆ/ನಿಯಮಗಳು/ಉಪವಿಧಿಗಳಲ್ಲಿ ವಿವರಿಸಿರುವಂತೆ ಉಪಯೋಗಿಸಲು ಭಾದ್ಯಕಾರಿಯಾಗಿರುತ್ತದೆ.

ಸತ್ಯ ಶಾಂತಿ ಸಹಕಾರ ಸಂಘ ಮುರ್ಕವಾಡ

ನಮ್ಮ ಸಂಸ್ಥೆಯ ಕಾರ್ಯ ಸಂಸ್ಕ್ರತಿ:-

  • ಸದಸ್ಯರೇ ಪ್ರಭು ಕಲ್ಪನೆ.
  • ಎಲ್ಲರೂ ಸಹೋದರ-ಸಹೋದರಿಯರು.
  • ಹಿರಿಯ-ಕಿರಿಯಗಿಂತ ಗುರು-ಶಿಷ್ಯ ಸಂಬಂಧ.
  • ನಮಗೆ ದುಡ್ಡು ಮುಖ್ಯ ಆದರೆ ದುಡ್ಡೇ ಮುಖ್ಯವಲ್ಲ.
  • ಎಲ್ಲರನ್ನು ಉತ್ತೇಜಿಸುವ ಮನೋಭಾವನೆ.
  • ಎಲ್ಲರಿಗೂ ಸಮಾನ ಅವಕಾಶ.
  • ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ.
  • ಗ್ರಾಹಕರ ನಿರೀಕ್ಷೆಗಳನ್ನು ತಲುಪುವುದು.
  • ಸಂಸ್ಥೆಯ ಖರ್ಚು-ವೆಚ್ಚಗಳ ನಿಭಾವಣೆಯಲ್ಲಿ ಪಾರದರ್ಶಕತೆ.
  • ಎಲ್ಲರ ನಡೆ-ನುಡಿಗಳಲ್ಲಿ ನಮ್ಯತೆ.
  • ಸದಸ್ಯರಿಗೆ ಅತ್ಯುನತ ಮಟ್ಟದ ಸೇವೆಯನ್ನು ಒದಗಿಸುವುದು.

ನೀವು ಇಲ್ಲಿ ಎಷ್ಟು ಹಣ ದುಡಿಮೆ ಮಾಡಿದಿರಿ ಎಂಬುವುದಕ್ಕಿಂತ ನಿಮ್ಮ ಜೀವನಕ್ಕಾಗಿ, ಸಮಾಜಕ್ಕಾಗಿ ಏನನ್ನು, ಎಷ್ಟನ್ನು ಗಳಿಸಿದಿರಿ ಎಂಬುವುದು ಮುಖ್ಯ.

ನಮ್ಮ ಸಂಸ್ಥೆಯ ವೈಶಿಷ್ಟ್ಯತೆಗಳು:-

  • ಸಂಪೂರ್ಣ ಗಣಿಕೃತ ವ್ಯವಸ್ಥೆ.
  • ಸೌಜನ್ಯಯುತ ಸಿಬ್ಬಂಧಿಗಳು.
  • ಸುಸ್ಸಜೀತ ಪೀಠೋಪಕರನಗಳನ್ನೊಳಗೊಂಡ ಆಸನ ವ್ಯವಸ್ಥೆ.
  • ಸಿ.ಸಿ.ಟಿವಿ, ಜನರೇಟರ್‌ ಮತ್ತು ಯುಪಿಎಸ್‌ ವ್ಯವಸ್ಥೆ.
  • ಮುಕ್ತ ಚರ್ಚೆ.
  • ನುರಿತ ಸಿಬ್ಬಂಧಿ ವರ್ಗ.
  • ಸ್ಪರ್ಧಾತ್ಮಕ ಶುಲ್ಕ ವ್ಯವಸ್ಥೆ.
  • ಸಿಬ್ಬಂಧಿ ವರ್ಗಕ್ಕೆ ಪ್ರಯಾಣ ಭತ್ಯೆ.
  • ಕೆಲಸ ನಿರ್ವಹಿಸಲು ಉತ್ತಮ ವಾತಾವರಣ.
  • ಪ್ರತೇಕ ಯುಸರನೆಮ್‌ ಮತ್ತು ಪಾಸವರ್ಡ.
  • ಕೆಲಸ ನಿರ್ವಹಣೆಗಾಗಿ ಪ್ರತೇಕ ಸಾಫ್ಟವೇರ್.‌
  • ವ್ಯಕ್ತಿತ್ವ ವಿಕಸನಕ್ಕೆ ವಿಫುಲ ಅವಕಾಶ.
  • ಹಣಕಾಸು ಗ್ರಾಹಕರಿಗೆ ವಿಧಿಸುವ ಶುಲ್ಕ, ಖರ್ಚು-ವೆಚ್ಚಗಳಲ್ಲಿ, ನಡೆ-ನುಡಿಗಳಲ್ಲಿ ಪಾರದರ್ಶಕತೆ.

ನಮ್ಮ ಮಹದಾಶೆ ಏನೆಂದರೆ ನಮ್ಮ ಸಂಸ್ಥೆಯನ್ನು ಮುಂಚುಣಿ ಸ್ಥಾನದಲ್ಲಿ ನಿಲ್ಲಿಸಿ ಸದಸ್ಯರಿಗೆ ಗುಣಮಟ್ಟದ ಹಾಗೂ ಮೌಲ್ಯಯುತ ಸೇವೆ ನೀಡುವುದು.

RTGS

NEFT

Net Banking