Loans

Loan

ರಾಜಕೀಯದಲ್ಲಿ ಸಹಕಾರ ಇರಲಿ ಸಹಕಾರದಲ್ಲಿ ರಾಜಕೀಯ ಬೇಡ. ಸಾಮಾಜಿಕ ಕಳಕಳಿಯೇ ಸಹಕಾರದ ಬುನಾದಿ. ಸ್ವಾತಂತ್ರಕ್ಕೆ ಸಹಕಾರವೇ ಹೆಬ್ಬಾಗಿಲು. ಸಹಕಾರ ನಮ್ಮದು ಎಂಬ ಭಾವನೆ ಸದಸ್ಯರಲ್ಲಿ ಬಂದಾಗ ಪ್ರಗತಿ ಸಾಧ್ಯ ,ಸಹಕಾರ ಸಂಘದಿಂದ ಸಾಲ ಪಡೆಯುವುದು ನಮ್ಮ ಹಕ್ಕು. ಸಕಾಲದಲ್ಲಿ ಮರುಪಾವತಿ ಮಾಡುವುದು ನಮ್ಮ ಜವಾಬ್ದಾರಿ.

ಸಾಲ ಯೋಜನೆಗಳು:

• ರೈತರಿಗೆ 3-4 ತಿಂಗಳ ಹಂಗಾಮು ಸಾಲ ಸೌಲಭ್ಯ.
• ಆಕಳು ಮತ್ತು ಕುರಿ ಸಾಕಾಣಿಕೆಗೆ ಸಾಲ ಸೌಲಭ್ಯ.
• ವೈಯಕ್ತಿಕ ಸಾಲ ಸೌಲಭ್ಯ.
• ಗುಂಪು/ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ.
• ಗ್ರಾಹಕ ಪಿಗ್ಮಿ ಸಾಲ ಸೌಲಭ್ಯ.
• ವ್ಯವಹಾರಿಕ ಸಾಲ ಸೌಲಭ್ಯ.
• ಮಕ್ಕಳ ಶಿಕ್ಷಣ ಠೇವು/ಆವರ್ತಕ ಯೋಜನೆಯ ಮೇಲೆ ಸಾಲ ಸೌಲಭ್ಯ(ಕೇವಲ ಮಕ್ಕಳ ಶಿಕ್ಷಣದ ಸಲುವಾಗಿ).
• ನಮ್ಮ ಮಕ್ಕಳು ನಮ್ಮ ಹೆಮ್ಮೆ ಠೆವು/ಆವರ್ತಕ ಯೋಜನೆಯ ಮೇಲೆ ಸಾಲ ಸೌಲಭ್ಯ.
• ತುರ್ತು ಆರೋಗ್ಯ ಸೇವೆ ಸಾಲ ಸೌಲಭ್ಯ.

ಸಾಲದ ಕುರಿತು ಗಮನಿಸಬೇಕಾದ ಅಂಶಗಳು:
• ಸಹಕಾರಿಯು ಸದಸ್ಯನಿಗೆ ಮಾತ್ರ ಸಾಲ ನೀಡುತ್ತದೆ ಹೊರತು ಸಾರ್ವಜನಿಕರಿಗೆ ಸಾಲ ನೀಡುವುದಿಲ್ಲ.
• ಸಹಕಾರಿಯು ತನ್ನ ಉದ್ದೇಶದ ಈಡೇರಿಕೆಗಾಗಿ ಸದಸ್ಯರುಗಳಿಗೆ ಅಗತ್ಯಕ್ಕೆ ತಕ್ಕಂತೆ ಸಾಲ ನೀಡುವುದು.
• ಸಹಕಾರಿಯು ಸಾಲದ ಮೇಲಿನ ಬಡ್ಡಿ ದರವನ್ನು ನಿರ್ಧರಿಸುವಾಗ ಸಂಘದ ಆರ್ಥೀಕ ಸ್ಥಿರತೆ, ಸದಸ್ಯರ ಹಿತಾಸಕ್ತಿ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ.
• ಬಡ್ಡಿ ನೀಡುವ ಸದಸ್ಯನು ನಮ್ಮ ಸದಸ್ಯನೇ ಆಗಿರುತ್ತಾನೆ.
• ಬಡ್ಡಿದರ ನಿಗದಿ ಪಡಿಸುವ ಪ್ರಕ್ರೀಯೆ ಪಾರದರ್ಶಕವಾಗಿರಬೇಕು.
• ಬಡ್ಡಿದರವನ್ನು ಹಲವಾರು ಅಂಶಗಳನ್ನು ಪರಿಗಣಿಸಿ ನಿಗದಿ ಪಡಿಸಬೇಕು.
• ಆಡಳಿತ ಮಂಡಳಿಯವರು ಸದಸ್ಯರಿಗೆ ನೀಡಬಹುದಾದ ಸಾಲಗಳು, ಅವುಗಳ ಅರ್ಜಿ ಸಲ್ಲಿಕೆ , ಮಂಜೂರಾತಿ, ಬಿಡುಗಡೆ, ವಸೂಲಾತಿ, ನಿರ್ವಹಣೆ, ಆದಾಯ ಪರಿಗಣನೆ, ದಾಖಲಾತಿ ನಿರ್ವಹಣೆ ಮುಂತಾದ ಸಾಮನ್ಯ ನಿಯಮಗಳನ್ನು ರೂಪಿಸಿಕೊಂಡು ಸಾಲವನ್ನು ಕೊಡತಕ್ಕದ್ದು.
• ಯಾವ ಯಾವ ಸಾಲಗಳು ಯಾರಿಗೆ, ಎಷ್ಟು, ಹೇಗೆ, ಯಾವ ಆದಾರದ ಮೇಲೆ ಮಂಜೂರ ಮಾಡಬಹುದು ಎಂಬ ಸ್ಪಷ್ಟ ವಿವರಣೆ ಇರತಕ್ಕದ್ದು.
• ಸದಸ್ಯರ ಅನಿವಾರ್ಯತೆಯನ್ನು ದುರ್ಬಳಕೆ ಮಾಡಿಕೊಂಡು ಸದಸ್ಯರನ್ನು ಶೋಷಿಸುವುದು ಸಹಕಾರಿಯ ವ್ಯವಹಾರಕ್ಕೆ ಶ್ರೇಯಸಕರವಲ್ಲ.
• ಸಹಕಾರಿಯು ಸಾಲದ ಮರುಪಾವತಿ ಪ್ರಕ್ರೀಯೆ ಸಮರ್ಪಕವಾಗಿರುವಂತೆ ನೋಡಿಕೊಳ್ಳವುದು ಅತ್ಯಂತ ಅವಶ್ಯಕ.
• ಸಹಕಾರಿಯ ಎಲ್ಲ ವೆಚ್ಚಗಳನ್ನು ಭರಿಸುವವರು ಸಾಲಗಾರರೇ ಆಗಿರುವುದರಿಂದ ಸಾಲಗಾರರೇ ಅತೀ ಪ್ರಮುಖ ಸದಸ್ಯರು.

ಜಾಮೀನುದಾರರ ಜವಾಬ್ದಾರಿ ಮತ್ತು ಕರ್ತವ್ಯಗಳು:

  • ಜಾಮೀನುದಾರರು ಮೊದಲು ಸಹಕಾರಿಯ ಸದಸ್ಯರಾಗಿರತಕ್ಕದ್ದು.
  • ಜಾಮೀನುದಾರರು ಸಾಲಗಾರರಷ್ಟೇ ಸಹಕಾರಿಯ ಸಾಲದ ಹಣಕ್ಕೆ ಜವಾಬ್ದಾರರಾಗಿರುತ್ತಾರೆ.
  • ಸಾಲಗಾರರು ಬಾಕಿದಾರರಾಗಿದ್ದಲ್ಲಿ, ಜಾಮೀನುದಾರರು ಬಾಕಿದಾರರಾಗಿರುತ್ತಾರೆ.
  • ಜಾಮೀನುದಾರರು ಯಾರಿಗೇ ಆಗಲಿ ಜಾಮೀನು ನೀಡುವುದಕ್ಕಿಂತ ಮುಂಚೆ ಸಾಲಗಾರರ ಆರ್ಥೀಕ ಸ್ಥಿತಿ, ಸಾಲದ ಉದ್ದೇಶ ಮತ್ತು ಸಾಲ ತೀರಿಸುವ ಶಕ್ತಿಯಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು.
  • ಸಹಕಾರಿಯು ಸೂಕ್ತ ನ್ಯಾಯ ಕ್ರಮಗಳಿಗನುಸಾರವಾಗಿ ಕ್ರಮ ಕೈಗೊಂಡು ಜಾಮೀನುದಾರರ ಚರ, ಸ್ಥಿರ, ಜಂಗಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಮತ್ತು ವಿಕ್ರಯಿಸಬಹುದು.