ನಮ್ಮ ಸಂಸ್ಥೆಯ ಪ್ರತಿಜ್ಞೆ
- ನಾನು ಸತ್ಯ ಶಾಂತಿ ಸಹಕಾರ ಸಂಘದ ಸದಸ್ಯ .
- ಇದು ನನ್ನ ಸಂಸ್ಥೆ.
- ನನಗೆ ಆಶ್ರಯ ನೀಡುವ ಸಂಸ್ಥೆ.
- ನನಗೆ ಅನ್ನ ನೀಡುವ ಸಂಸ್ಥೆ.
- ನನಗೆ ಗೌರವ ನೀಡುವ ಸಂಸ್ಥೆ.
- ನನಗೆ ಬದುಕು ನೀಡುವ ಸಂಸ್ಥೆ.

ಆದ್ದರಿಂದ ನಾನು ಅತ್ಯಂತ ಶ್ರದ್ಧೆಯಿಂದ ನನ್ನ ಕೆಲಸಗಳನ್ನು ನಿರ್ವಹಿಸುತ್ತೇನೆ.
- ನನ್ನ ಕೆಲಸದಲ್ಲಿ, ನಡೆ-ನುಡಿಯಲ್ಲಿ ಪ್ರಾಮಾಣಿಕತೆಯಿಂದ ಇರುತ್ತೇನೆ.
- ಸಂಸ್ಥೆಯ ಗೆಲುವು ನನ್ನ ಗೆಲುವು.
- ಸಂಸ್ಥೆಗೆ ಯಾವುದೇ ನಷ್ಟವನ್ನುಂಟು ಮಾಡುವುದಿಲ್ಲ, ಅನ್ಯರು ಮಾಡಿದರೆ ಸುಮ್ಮನೆ ಇರುವುದಿಲ್ಲ.
- ಸಂಸ್ಥೆಯ ಸದಸ್ಯರನ್ನು, ಸಿಬ್ಬಂದಿಗಳನ್ನು ನನ್ನ ಬಳಗದವರೆಂದು ಭಾವಿಸಿ ಎಲ್ಲರೊಡನೆ ಸೌಜನ್ಯದಿಂದ ವರ್ತಿಸುತ್ತೇನೆ.