ಸಂಸ್ಥೆಯ ಸದಸ್ಯತ್ವಕ್ಕೆ ಅರ್ಹತೆಗಳು
ವ್ಯಕ್ತಿಯು-
- ಸಂಸ್ಥೆಯ ಕಾರ್ಯಕ್ಷೇತ್ರದ ನಿವಾಸಿಯಾಗಿರಬೇಕು.
- 18 ವರ್ಷ ತುಂಬಿರಬೇಕು.
- ದಿವಾಳಿಕೋರನಾಗಿರಬಾರದು.
- ಮಾನಸಿಕ ಅಸ್ವಸ್ಥನಾಗಿರಬಾರದು.
- ಸದಸ್ಯತ್ವಕ್ಕೆ ಅರ್ಹತೆಯನ್ನು ಪಡೆದುಕೊಳ್ಳುತ್ತಾನೆ.
ವ್ಯಕ್ತಿಯೇತರ
- ಅಂದರೆ ಕಾನೂನಿನ ಮೇರೆಗೆ ರಚನೆಗೊಂಡ ಸಂಸ್ಥಾ ರೂಪದ ವ್ಯಕ್ತಿ, ಕರ್ನಾಟಕ ಸಹಕಾರ ಸಂಘಗಳ ನೊಂದಣಿ ಕಾಯಿದೆ ಮೇರೆಗೆ ನೊಂದಣಿಯಾದ ಸಂಘಗಳು, ಸ್ವಸಹಾಯ ಸಂಘಗಳು ಯಾ ಗುಂಪುಗಳು ಯಾ ಸಂಘಟನೆಗಳು ಸಹಕಾರಿಯ ಕರ್ಯಕ್ಷೇತ್ರದಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದರೆ ಇವು ಸಹ ಸದಸ್ಯತ್ವಕ್ಕೆ ಅರ್ಹತೆಯನ್ನು ಪಡೆದುಕೊಳ್ಳುತ್ತವೆ.
ಸಂಘದಲ್ಲಿ ಸದಸ್ಯತ್ವ ನೀಡುವ ಸಮಸ್ತ ಹಕ್ಕು ಮತ್ತು ಕರ್ತವ್ಯ ಮಂಡಳಿಗೆ ಇರುತ್ತದೆ. ಸದಸ್ಯರಾಗ ಬಯಸುವರು ಮಂಡಳಿ ಕಾಲಕಾಲಕ್ಕೆ ನಿಗದಿಪಡಿಸಿದ ಶೇರು ಶುಲ್ಕ ಮತ್ತು ಪ್ರವೇಶ ಶುಲ್ಕದೊಂದಿಗೆ ಕನಿಷ್ಠ ಒಂದು ಶೇರಿನ ಪೂರ್ಣ ಹಣವನ್ನು ಪಾವತಿ ಮಾಡಿ ನಿಗದಿತ ನಮೂನೆಯಲ್ಲಿ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬೇಕು.
ಸದಸ್ಯನ ಕರ್ತವ್ಯಗಳು:-
- ಉಪವಿಧಿಗಳಲ್ಲಿ ನಿರ್ದಿಷ್ಟ ಪಡಿಸಿದ ಕನಿಷ್ಟ ಶೇರು ಮತ್ತು ಠೇವಣಿಯನ್ನು ಪಾವತಿಸಿರತಕ್ಕದ್ದು.
- ಸಹಕಾರಿಯಿಂದ ಪಡೆದ ಸಾಲವನ್ನು ಸಹಕಾರಿ ನಿಗದಿಪಡಿಸಿದ ಅವಧಿಗೆ ಅನುಗುಣವಾಗಿ ಮರುಪಾವುತಿಸುವುದು.
- ತನ್ನ ಮಾರಣಾ ನಂತರದಲ್ಲಿ ತನ್ನ ಶೇರಿನ ಹಿತಾಸಕ್ತಿಯನ್ನು ಪಡೆಯಲು ನಾಮಿನಿಯನ್ನು ನೇಮಕ ಮಾಡತಕ್ಕದ್ದು.
- ತನ್ನ ವಾಸಸ್ಥಳ, ವಿಳಾಸದಲ್ಲಿ ಯಾವುದೇ ಬದಲಾವಣೆಯಾದಲ್ಲಿ ಅಂತಹ ಬದಲಾವಣೆಯನ್ನು ಸಹಕಾರಿಗೆ 15 ದಿನಗಳ ಒಳಗೆ ಲಿಖಿತ ರೂಪದಲ್ಲಿ ತಿಳಿಸತಕ್ಕದ್ದು.
- ಸಹಕಾರಿಯ ಹಿತಕ್ಕೆ ದಕ್ಕೆ ತರುವಂತಹ ಯಾವುದೇ ಕೃತ್ಯವನ್ನು ಎಸಗತಕ್ಕದಲ್ಲ.
ಶೇರು ಮತ್ತು ಡೆಪಾಸಿಟ್‌ಗಳ ಮೇಲೆ ಗ್ರಹಣಾಧಿಕಾರ
ಸಹಕಾರಿಯು ಪ್ರಥಮ ಗ್ರಹಣಾಧಿಕಾರ ಹೊಂದಿದ್ದು ಸದಸ್ಯನಿಂದ ಕಾಲ-ಕಾಲಕ್ಕೆ ಬರತಕ್ಕ ಎಲ್ಲಾ ಮೊಬಲಗುಗಳ ವಸುಲಾತಿಗೆ ಪ್ರಥಮ ಹಕ್ಕು ಪಡೆದಿರುತ್ತದೆ.

ಸದಸ್ಯರ ಜವಾಬ್ದಾರಿ
- ಸದಸ್ಯರ ಹೊಣೆಗಾರಿಕೆಯು ಅವರು ಪಡೆದಿರುವ ಶೇರಿನ ಹಣಕ್ಕೆ ಮಾತ್ರ ಸೀಮಿತವಾಗಿರುತ್ತದೆ.
- ಸದಸ್ಯನು ಸಹಕಾರಿಯೊಡನೆ ನಡೆಸಬೇಕಾದ ಕನಿಷ್ಠ ವ್ಯವಹಾರದ ಪ್ರಮಾಣವು ಕೆಳಗಿನಂತಿರತಕ್ಕದ್ದು:
- ಸಹಕಾರಿಯು ಹೊಂದಿರುವ ಪಾಲು ಬಂಡವಾಳದಲ್ಲಿ ಪೂರ್ಣವಾಗಿ ಪಾವತಿಸಿದ ಕನಿಷ್ಠ ಒಂದು ಶೇರನ್ನು ಹೊಂದಿರತಕ್ಕದ್ದು.
- 5 ಸಹಕಾರಿ ವರ್ಷಗಳ ಪೈಕಿ ಈ ಕೆಳಕಂಡ ಯಾವುದೇ ಎರಡು ಸಹಕಾರಿ ವರ್ಷಗಳಲ್ಲಿ ಕನಿಷ್ಠ ಒಂದನಾದರೂ ವಹಿವಾಟು ಮಾಡುವುದು ಸದಸ್ಯರ ಜವಾಬ್ದಾರಿ ಅಗಿರುತ್ತದೆ.
- ಸಹಕಾರಿಯ ಯಾವುದೇ ರೀತಿಯ ಠೇವಣಿ ಯೋಜನೆಯಲ್ಲಿ(ಪಿಗ್ಮಿ ಹೊರತುಪಡಿಸಿ) ಕನಿಷ್ಠ 1000 ರೂಪಾಯಿಗಳನ್ನು ತೊಡಗಿರಿಸಿರಬೇಕು.
- ಹಿಂದಿನ ಒಂದು ವರ್ಷದಲ್ಲಿ ಕನಿಷ್ಠ 500 ರೂಪಾಯಿ ಬಡ್ಡಿಯನ್ನು ಕನಿಷ್ಟ 3 ತಿಂಗಳಿಗಳಿಗಿಂತ ಬಾಕಿ ಉಳಿಯದಂತೆ ಸಾಲದ ಖಾತೆಗೆ ಬಡ್ಡಿಯನ್ನು ಪಾವತಿಸಿರಬೇಕು.
ನಾಮ ನಿರ್ದೇಶನ ಗಮನಿಸಬೇಕಾದ ಅಂಶಗಳು
- ಶೇರುದಾರ/ಠೇವಣಿದಾರ ಮರಣ ಹೊಂದಿದರೆ ಠೇವಣಿಯ ಹಣ ಯಾರಿಗೆ ಸಲ್ಲಿಸಬೇಕೆಂದು ನಿರ್ದೇಶನ ನೀಡುವ ಸೌಲಭ್ಯ.
- ಖಾತೆದಾರನು ನಾಮ ನಿರ್ದೇಶನವನ್ನು ಯಾವುದೇ ಸಮಯದಲ್ಲಿ ಬದಲಾಯಿಸಬಹುದು ಅಥವಾ ರದ್ದು ಪಡಿಸಬಹುದು.
- ಖಾತೆ ಪ್ರಾರಂಭಿಸುವ ಅರ್ಜಿಯಲ್ಲಿ ನಾಮ ನಿರ್ದೇಶಿತ ವ್ಯಕ್ತಿಯ ಹೆಸರು, ವಿಳಾಸ ಬರೆದು ಕೊಡಬೇಕು.
- ನಾಮ ನಿರ್ದೇಶನ ಮಾಡುವುದರಿಂದ ನಾಮ ನಿರ್ದೇಶಿತ ವ್ಯಕ್ತಿಯು ನಿರ್ದೇಶಿತ ಮೊಬಲಗು ಹಣವನ್ನು ಅಥವಾ ಸ್ವತ್ತನ್ನು ಸುಲಭವಾಗಿ ಪಡೆದುಕೊಳ್ಳಬಹುದು.
- ಖಾತೆದಾರರ ಮರಣದ ನಂತರವೇ ನಾಮ ನಿರ್ದೇಶನ ಜಾರಿಗೆ ಬರುತ್ತದೆ.
- ನಾಮಿನಿಯ ಹೆಸರು, ತಂದೆ/ಗಂಡನ ಹೆಸರು, ಸ್ಪಷ್ಟ/ಪೂರ್ಣ ವಿಳಾಸ, ಆಧಾರ ಸಂಖ್ಯೆ, ಪಾನ ಸಂಖ್ಯೆ ಸ್ಪಷ್ಟವಾಗಿ ನಮೂದಿಸಿರಬೇಕು.
- ಖಾತೆದಾರನ ಮರಣದ ಸಮಯದಲ್ಲಿ ನಾಮಿನಿ ಜೀವಂತವಾಗಿರತಕ್ಕದು.
- ಸ್ತಿರ ಸ್ವತ್ತುಗಳಿಗೆ ನಾಮ ನಿರ್ದೇಶನ ಸೌಲಭ್ಯವಿರದು.
- ವ್ಯಕ್ತಿ/ಜೆಂಟಿಯಾಗಿ ನಾಮ ನಿರ್ದೇಶನ ಮಾಡಬಹುದು.
- ಒಂದು ವೇಳೆ ಸದಸ್ಯನು ಮೃತನಾದ ಬಗ್ಗೆ ಅಧಿಕೃತ ಮಾಹಿತಿ ಬಂದ 30 ದಿನಗಳ ಒಳಗೆ ನಾಮ ನಿರ್ದೇಶಿತರಿಂದ ನಿರ್ದಿಷ್ಟ ಯಾವುದೇ ಪ್ರತಿಕ್ರೀಯೆ ಬಾರದೇ ಇದ್ದಲ್ಲಿ ಸದಸ್ಯನಿಂದ ಬರಬೇಕಾದ ಎಲ್ಲಾ ಬಾಕಿಯನ್ನು ಹೊಂದಾಣಿಕೆ ಮಾಡಿಕೊಂಡು ಉಳಿದ ಹಣವನ್ನು ಅವನ ಖಾತೆಗೆ ವರ್ಗಾವಣೆ ಮಾಡಲಾಗುವುದು.
ಸಹಕಾರಿಯ ಸದಸ್ಯತ್ವದ ಪ್ರಯೋಜನಗಳು:
- ಶೇರು ಪಡೆಯುವ ಅರ್ಹತೆ.
- ಠೇವಣಿ ಇಡುವ ಅರ್ಹತೆ.
- ಸಾಲ ಪಡೆಯುವ ಅರ್ಹತೆ.
- ಜಾಮೀನು ನೀಡುವ ಅರ್ಹತೆ.
- ಡಿವಿಡೆಂಟ್ ಪಡೆಯುವ ಅರ್ಹತೆ.
- ಶೇರು ಪತ್ರ ಪಡೆಯುವ ಅರ್ಹತೆ.
- ಶೇರು ವರ್ಗಾಯಿಸುವ ಅರ್ಹತೆ.
- ಸಹಕಾರಿಯ ಸೌಲಭ್ಯಗಳನ್ನು ಪಡೆಯುವ ಅರ್ಹತೆ
ಇತ್ಯಾದಿ ಪ್ರಯೋಜನಗಳನ್ನು ಪಡೆದಿರುತ್ತಾನೆ.
ಸದಸ್ಯತ್ವದ ಸಮಾಪ್ತಿ:-
- ಸಾಮನ್ಯವಾಗಿ ಯಾವುದೇ ನಿಶ್ಚಿತ ಅವಧಿ ಇರುವುದಿಲ್ಲ.
- ಸಹಕಾರಿಯ ಸದಸ್ಯನಾಗಿರುವ ಯಾವುದೇ ವ್ಯಕ್ತಿಯು ಮೃತಪಟ್ಟರೆ ಸದಸ್ಯತ್ವಕ್ಕೆ ರಾಜಿನಾಮೆ ಕೊಟ್ಟು ಮಂಡಳಿಯಿಂದ ಸ್ವೀಕೃತವಾದರೆ, ಅಧಿನಿಯಮ, ನಿಯಮದ ಅನ್ವಯ ಸದಸ್ಯತ್ವ ಪಡೆಯಲು ಅನುಮತಿಯಿರುತ್ತದೆ.
- ನೊಂದಾಯಿತ ಸಂಘ ವಿಸರ್ಜನೆಗೊಂಡರೆ ಅಥವಾ ಸಮಾಪನೆಗೊಂಡರೆ.
- ಸದಸ್ಯನು ಹೊಂದಿರುವ ಎಲ್ಲಾ ಶೇರುಗಳನ್ನು ವರ್ಗಾವಣೆ ಮಾಡಿದರೆ, ಆತನು ಹೊಂದಿರುವ ಎಲ್ಲಾ ಶೇರುಗಳನ್ನು ಮುಟ್ಟುಗೋಲು ಹಾಕಿಕೊಂಡರೆ, ಹೊಂದಾಣಿಕೆ ಮಾಡಿಕೊಂಡರೆ ಅಥವಾ ಸರಿ ಹೊಂದಿಸಿಕೊಂಡರೆ ಸದಸ್ಯತ್ವವು ಸಮಾಪ್ತಿಯಾಗುತ್ತದೆ.
- ಸಂಘದ ಸದಸ್ಯತ್ವಕ್ಕೆ ಮರುಪ್ರವೇಶ:
- ವ್ಯಕ್ತಿಯು ಸದಸ್ಯತ್ವದಿಂದ ಯಾವುದೇ ಕಾರಣದಿಂದ ಬಿಡುಗಡೆಗೊಂಡಲ್ಲಿ ಅವನು ಆ ರೀತಿ ಬಿಡುಗಡೆಗೊಂಡ ದಿನಾಂಕದಿಂದ ಒಂದು ವರ್ಷದ ವರೆಗೆ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವಂತಿಲ್ಲ, ಸದಸ್ಯತ್ವಕ್ಕೆ ಸೇರ್ಪಡೆಗೊಳ್ಳುವಂತಿಲ್ಲ.
ಶೇರು ಹಣದ ಮರು ಪಾವತಿ
- ರಾಜಿನಾಮೆ, ಮರಂ, ಅನರ್ಹತೆ ಅಥವಾ ಇನ್ಯಾವುದೇ ಕಾರಣದಿಂದ ಸದಸ್ಯನಿಗೆ ಶೇರು ಹಣ ಮರುಪಾವತಿ ಮಾಡುವುದು ಇದ್ದಲ್ಲಿ ಅಥವಾ ಸಾಲಕ್ಕೆ ವಜಾ ಮಾಡಿಕೊಳ್ಳುವುದಿದ್ದಲ್ಲಿ ಅಥವಾ ಮೃತ ವ್ಯಕ್ತಿಯ ವಾರಸುದಾರನಿಗೆ ವರ್ಗಾಯಿಸುವುದಿದ್ದಲ್ಲಿ ಆ ಸದಸ್ಯನಿಗೆ ನೀಡಬಹುದಾದ ಮೊತ್ತವನ್ನು ಆ ದಿನದಂದು ಸಹಕಾರಿಯ ಶೇರಿನ ಬೆಲೆಯನ್ನು ಆಧರಿಸಿ ನೀಡತಕ್ಕದ್ದು.
- ಆದರೆ ಪರಂತು ಶೇರಿನ ಮುಖ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ನೀಡತಕ್ಕದಲ್ಲ.
ಶೇರಿನ ಬೆಲೆ =
ಸಹಕಾರಿಯ ಒಟ್ಟು ಪಾಲು ಬಂಡವಾಳ – ಕ್ರೋಡೀಕೃತ ನಷ್ಟ
ಒಟ್ಟು ಶೇರುಗಳ ಸಂಖ್ಯೆ